ಬಾಮ್ ಜೀಸಸ್ ಬಸಿಲಿಕಾ (ಬಾಮ್ ಜೀಸಸ್ ಎಂದರೆ ಒಳ್ಳೆಯ (ಅಥವಾ ಪವಿತ್ರ) ಜೀಸಸ್) ಭಾರತದ ಗೋವಾ ರಾಜ್ಯದಲ್ಲಿ ಸ್ಥಿತವಾಗಿರುವ ರೋಮನ್ ಕ್ಯಾಥಲಿಕ್ ಬಸಿಲಿಕಾ ಆಗಿದೆ ಮತ್ತು ಗೋವಾದ ಚರ್ಚ್‌ಗಳು ಮತ್ತು ಕಾನ್ವೆಂಟ್‌ಗಳ ಯುನೆಸ್ಕೊ ವಿಶ್ವ ಪರಂಪರೆಯ ತಾಣದ ಭಾಗವಾಗಿದೆ. ಈ ಬಸಿಲಿಕಾ ಪೋರ್ಚುಗೀಸ್ ಭಾರತದ ಹಿಂದಿನ ರಾಜಧಾನಿಯಾದ ಹಳೆ ಗೋವಾದಲ್ಲಿ ಸ್ಥಿತವಾಗಿದೆ. ಇದು ಸಂತ ಫ಼್ರಾನ್ಸಿಸ್ ಸಾವೇರಿಯ ಮೃತ ಅವಶೇಷಗಳನ್ನು ಹೊಂದಿದೆ. ಈ ಜೆಸುಯಿಟ್ ಚರ್ಚ್ ಭಾರತದ ಮೊದಲ ಗೌಣ ಬಸಿಲಿಕಾ ಆಗಿದ್ದು ಬರೋಕ್ ವಾಸ್ತುಶಿಲ್ಪ ಮತ್ತು ಭಾರತದಲ್ಲಿನ ಪೋರ್ಚುಗೀಸ್ ವಸಾಹತುಶಾಹಿ ವಾಸ್ತುಶಿಲ್ಪದ ಅತ್ಯುತ್ತಮ ಉದಾಹರಣೆಗಳಲ್ಲಿ ಒಂದೆಂದು ಪರಿಗಣಿತವಾಗಿದೆ. ಇದು ವಿಶ್ವದಲ್ಲಿನ ಪೋರ್ಚುಗೀಸ್ ಮೂಲದ ಏಳು ಅದ್ಭುತಗಳಲ್ಲಿ ಒಂದಾಗಿದೆ. ಈ ಚರ್ಚ್‌ನ ನಿರ್ಮಾಣ ಕಾರ್ಯ ೧೫೯೪ ರಲ್ಲಿ ಆರಂಭವಾಯಿತು. ಈ ಚರ್ಚ್‌ನ್ನು ಮೇ ೧೬೦೫ ರಲ್ಲಿ ಧಾರ್ಮಿಕ ಉದ್ದೇಶಕ್ಕಾಗಿ ಸಮರ್ಪಿಸಲಾಯಿತು. ಈ ವಿಶ್ವ ಪರಂಪರೆಯ ಸ್ಮಾರಕವು ಕ್ರೈಸ್ತ ಧರ್ಮದ ಇತಿಹಾಸದಲ್ಲಿ ಮೈಲಿಗಲ್ಲಾಗಿ ಹೊರಹೊಮ್ಮಿದೆ. == ಉಲ್ಲೇಖಗಳು ==